ದಾವಣಗೆರೆ: ಮಹಾಶಿವರಾತ್ರಿ ಹಬ್ಬವನ್ನು (Mahasghivaratri) ರಾಜ್ಯದೆಲ್ಲೆಡೆ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನು ಭಕ್ತಿ ಎಲ್ಲಿದೆಯೋ ಅಲ್ಲಿ ದೇವರು ಇದ್ದಾನೆ ಎಂಬ ಮಾತುಗಳನ್ನು ಕೇಳಿರಬಹುದು. ಈ ಸತ್ಯಗಳು ಅದೆಷ್ಟೋ ಬಾರಿ ಸಾಬೀತಾಗಿದೆ. ಇದೀಗ ಅಂತದ್ದೇ ಪವಾಡವೆಂಬಂತೆ ಮಹಾಶಿವರಾತ್ರಿ ದಿನವೇ ನದಿಯೊಂದರಲ್ಲಿ ಶಿವಲಿಂಗವೊಂದು (Shivalinga) ಉದ್ಭವಾಗಿದೆ.
ಹೌದು, ಮಹಾ ಶಿವರಾತ್ರಿ ದಿನವೇ ತುಂಗಭದ್ರಾ ನದಿಯಲ್ಲಿ ಶಿವಲಿಂಗವೊಂದು ಉದ್ಭವವಾಗಿರುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ತುಂಬಾ ಸಂತೋಷಗೊಂಡಿದ್ದು, ಉದ್ಭವ ಶಿವಲಿಂಗ ನೋಡಲು ಭಕ್ತರ ದಂಡೇ ಹರಿದುಬರುತ್ತಿದೆ.
ಮಹಾಶಿವರಾತ್ರಿ ದಿನವೇ ನದಿಯಲ್ಲಿ ಶಿವಲಿಂಗ ಉದ್ಭವ!
ಮಹಾಶಿವರಾತ್ರಿ ದಿನವೇ ತುಂಗಭದ್ರಾ ನದಿಯಲ್ಲಿ ಪುರಾತನ ಕಾಲದ ಈಶ್ವರ ಲಿಂಗವೊಂದು ಪತ್ತೆಯಾಗಿದೆ. ಸದ್ಯ ಇದನ್ನು ನೋಡಲು ಭಕ್ತರ ದಂಡೇ ಹರಿದು ಬರುತ್ತಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ತುಂಗಭದ್ರಾ ನದಿಯಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಹಬ್ಬದ ನಿಮಿತ್ತ ನದಿ ಸ್ನಾನ ಮತ್ತು ವಾಹನ ತೊಳೆಯಲೆಂದು ಹೊನ್ನಾಳಿ ಜನರು ಆಗಮಿಸಿದ್ದರು. ಈ ವೇಳೆ ಕೆ ಎಸ್ ಆರ್ ಟಿ ಸಿ ಡ್ರೈವರ್ ಪ್ರಕಾಶ್ ಎಂಬವರ ಕಾಲಿಗೆ ಶಿವಲಿಂಗ ತಾಗಿದೆ. ತಕ್ಷಣ ಆತ ಸಂಶಯಗೊಂಡು ನೀರಿನಲ್ಲಿ ಕೈಹಾಕಿ ನೋಡಿದ್ದಾರೆ. ಈ ವೇಳೆ ಶಿವಲಿಂಗ ಇರೋದು ಗೊತ್ತಾಗಿದೆ.
ಪತ್ತೆಯಾದ ಶಿವಲಿಂಗ
ಬಳಿಕ ಅಲ್ಲೇ ಇದ್ದ ಜನರನ್ನು ಕರೆದು ಶಿವಲಿಂಗ ಮೇಲೆತ್ತಿದ್ದು, ಮಹಾಶಿವರಾತ್ರಿ ದಿನವೇ ಈಶ್ವರ ಲಿಂಗ ಪತ್ತೆಯಾಗಿರುವುದನ್ನು ನೋಡಿ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ನಂತರ ನದಿ ದಡದಲ್ಲಿ ಲಿಂಗ ಇಟ್ಟು ಭಕ್ತರು ಪೂಜೆಯನ್ನೂ ಸಲ್ಲಿಸಿದ್ದಾರೆ. ಸದ್ಯ ಶಿವಲಿಂಗ ಮಾತ್ರ ಪತ್ತೆಯಾಗಿದ್ದು, ಇದರ ಇತಿಹಾಸದ ಬಗ್ಗೆ ಮಾಹಿತಿ ಅಧ್ಯಯನದ ಮೂಲಕ ತಿಳಿಯಬೇಕಿದೆ.
ಶಿವಲಿಂಗದ ಮುಂದೆ ನಂದಿ ಇರುವುದು ಯಾಕೆ?
ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿಯನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಇನ್ನು ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ, ಇದಕ್ಕೆ ಮಾಸ ಶಿವರಾತ್ರಿ ಎಂದೂ, ವರ್ಷಕ್ಕೆ ಒಮ್ಮೆ ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎನ್ನಲಾಗುತ್ತದೆ. ಆದರೆ ಶಿವ ಸ್ವರೂಪವಾದ ಶಿವಲಿಂಗ ಇರುವ ದೇವಾಲಯದಲ್ಲಿ ಲಿಂಗಕ್ಕೆ ಎದುರಾಗಿ ಒಂದು ನಂದಿಯ ಮೂರ್ತಿ ಇದ್ದೇ ಇರುತ್ತದೆ. ಆದರಂತೆ ಶಿವನ ದೇವಾಲಯಕ್ಕೆ ಬರುವ ಭಕ್ತರು ಮೊದಲು ನಂದಿಗೆ ನಮಸ್ಕರಿಸಿ ನಂತರ ಶಿವ ದೇವಾಲಯದ ಒಳಗಡೆ ಹೋಗುತ್ತಾರೆ. ಹಾಗಾದರೆ ಶಿವಲಿಂಗದ ಮುಂದೆ ನಂದಿಯ ಮೂರ್ತಿ ಇರುವುದೇಕೆ ಗೊತ್ತಾ? ನಂದಿಯು ಜನಿಸಿದ್ದು ಹೇಗೆ ಗೊತ್ತಾ?
ಶಿವ ದೇವಾಲಯ ಅಂದ ಮೇಲೆ ಅಲ್ಲಿ ನಂದಿಗೂ ಒಂದು ಮಂಟಪ ಇರಲೇಬೇಕು, ಇದ್ದೇ ಇರುತ್ತದೆ. ನಂದಿಯನ್ನು ಶಿವನ ವಾಹನ ಎಂದು ಕೂಡ ಹೇಳಲಾಗುವುದು. ಇನ್ನು ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶಿವನ ಮುಂದೆ ನಂದಿಯನ್ನು ಪೂಜಿಸಲಾಗುತ್ತದೆ. ನಂದಿ ಶಿವನ ಪರಮ ಭಕ್ತ ಜೊತೆಗೆ ವಾಹನ ಕೂಡ. ಶಿವನು ನಂದಿಯ ಮೂಲಕ ಮಾತ್ರ ಪೂಜೆಯನ್ನು ಸ್ವೀಕರಿಸುತ್ತಾನೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ನಂದಿಯ ಮೂಲಕ ತಿಳಿಸಿದರೆ, ಅದು ಬೇಗ ಶಿವನಿಗೆ ತಲುಪುತ್ತದೆ ಎನ್ನಲಾಗಿದೆ. ಇನ್ನು ಶಿವನ ಎದುರು ನಂದಿ ಇರುವುದಕ್ಕೆ ಅನೇಕ ಕಾರಣ ಮತ್ತು ಅರ್ಥಗಳು ಇವೆ. ಅವುಗಳ ಕುರಿತು ಒಂದಿಷ್ಟು ಮಾಹಿತಿ ಈ ಲೇಖನದಲ್ಲಿದೆ.