ಸುದ್ದಿ ಎಂದರೆ ದ್ವೇಷ, ವಿಷ ಹಾಗೂ ವಿವಾದಗಳನ್ನು ಹರಡುವುದಲ್ಲ; ಅಭಿವೃದ್ಧಿಯ ಮೆಟ್ಟಿಲು ಆಗಬೇಕು. ಇಂದು ಕ್ಷಣ ಮಾತ್ರದಲ್ಲಿ ಒಂದು ಘಟನೆ ಹಲವಾರು ಬಣ್ಣಗಳನ್ನು ಬದಲಿಸಿ ವಸ್ತುನಿಷ್ಠತೆಯನ್ನು ಮರೆಯಾಗುವಷ್ಟು ಎಲ್ಲರ ಬೆರಳ ತುದಿಯಲ್ಲಿ ಇರುತ್ತದೆ. ಇಂತಹ ಸುದ್ದಿಯ ಮೂಲ ಸ್ವರೂಪವನ್ನು ‘ಇದ್ದದ್ದು ಇದ್ದ ಹಾಗೆ’ ಜನರ ಮುಂದೆ ತೆರೆದು ಇಡುವುದು ನಮ್ಮ …….. ನ ಆಶಯ
ಸಮಾಜದ ಸಮಸ್ಯೆಗಳನ್ನು ಬಿತ್ತರಿಸುವುದಷ್ಟೇ ಅಲ್ಲದೇ ಅದಕ್ಕೆ ಪರಿಹಾರ ಸೂಚಿಸುವುದು ಇಂದಿನ ದಿನಗಳಲ್ಲಿ ಅಗತ್ಯ ಆಗಿದೆ. ಎಲ್ಲ ಪ್ರಜೆಗಳು ನೆಮ್ಮದಿಯ ಜೀವನ ನಡೆಸಬೇಕು. ಸರಕಾರದ ಆಡಳಿತ ಹಾಗೂ ಜನರ ನಡುವಿನ ಕೊಂಡಿಯಾಗಿ ………. ಕೆಲಸ ಮಾಡುತ್ತದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ.
ನೊಂದ ಮತ್ತು ಶೋಷಣೆಗೆ ಒಳಗಾದ ಜನಗಳಿಗೆ ನಮ್ಮ ಪ್ರಯತ್ನಕ್ಕೆ ನ್ಯಾಯ ದೊರಕಬೇಕು. ಅವರ ಮುಖದಲ್ಲಿ ನೆಮ್ಮದಿಯ ನಗು ಮೂಡಿಸುವಲ್ಲಿ …. ಕಾರ್ಯ ನಿರ್ವಹಿಸುತ್ತದೆ.
ನಿಮ್ಮ ಬೆಂಬಲ – ನಮಗೆ ಬಲ
ಯುಗಭಾರತ ಫೌಂಡೇಶನ್ :
ಕತ್ತಲೆಯನ್ನು ಹೊಡೆದೊಡಿಸಲು ಜ್ವಾಲಾಮುಖಿಯೇ ಬೇಕಾಗಿಲ್ಲ, ಒಂದು ಸಣ್ಣ ಮಿಣುಕುಹುಳದ ಹಾರಾಟವೇ ಸಾಕು. ಅಣ್ಣ ಬಸವಣ್ಣನವರು ಹೇಳಿದಂತೆ ಅರಿವೇ ಗುರು. ಅನಕ್ಷರಸ್ತ, ದೀನದಲಿತರ ಬದುಕಲ್ಲಿ ಜ್ಞಾನದ ಬೆಳಕು ಮೂಡಿಸಿ ಸಾಕ್ಷರತೆಯೆಂಬ ಹಣತೆ ಹಚ್ಚುವಂತ ಕೆಲಸ ‘ಯುಗಭಾರತ ಫೌಂಡೇಶನ್’ ಮಾಡುತ್ತದೆ.
ಪರಿಪೂರ್ಣ ಜೀವನ ಎಂದರೆ ಕಾರು, ಬಂಗಲೆ, ದೊಡ್ಡ ದೊಡ್ಡ ಗ್ರಂಥಗಳನ್ನು ಓದುವುದೂ ಸಹ ಅಲ್ಲ; ಹೊಟ್ಟೆಗೆ ಒಂದು ತುತ್ತು ಅನ್ನ. ಹಿಡಿ ಪ್ರೀತಿ ದೊರೆತರೆ ಸಾಕು. ಜನರ ಮೂಲಭೂತ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅವರ ಜೀವನಮಟ್ಟ ಸುಧಾರಣೆಗೊಳಿಸಲು
ಮಾನವೀಯ ಮೌಲ್ಯಗಳ ಪಸರಿಸಲು ಹಾಗು ಸಂತಸಮಯ ಬದುಕು ಸಾಗಿಸುವತ್ತ ಇರುವ ಅಡೆತಡೆಗಳನ್ನು ನಿವಾರಿಸಲು ಶೈಕ್ಷಣಿಕ ಶಿಬಿರ, ಆರೋಗ್ಯ ಶಿಬಿರ, ವಿಚಾರ ಸಂಕಿರಣಗಳನ್ನು ‘ಯುಗಭಾರತ ಫೌಂಡೇಶನ್’ ಆಯೋಜಿಸುತ್ತದೆ.
ನಮ್ಮೊಂದಿಗೆ ನೀವು ಕೈಜೋಡಿಸಿ…